ಸ್ಥಳ ಮತ್ತು ಕೊಠಡಿಗಳು

ಕಾರ್ಯಕ್ರಮಕ್ಕೆ ಬೇಕಿರುವ ಸ್ಥಳ ಮತ್ತು ಕೊಠಡಿಗಳು:

MKCCಯು ವಿವಿಧ ವ್ಯಾಪ್ತಿಯ ವಿನೂತನವಾದ ಸ್ಥಳ ಮತ್ತು ಕೊಠಡಿಗಳನ್ನು ಹೊಂದಿದ್ದು ಇದು ಎಲ್ಲಾ ರೀತಿಯ ವಿಶೇಷ ಸಮಾರ೦ಭ ನೆಡೆಸಲು ಸೂಕ್ತವಾಗಿದೆ. ನೀವು ಈ ಸಭಾ೦ಗಣದಲ್ಲಿ ಕಾರ್ಯಕ್ರಮ ಮಾಡಿದ್ದೆ ಆದಲ್ಲಿ ಅದು ನಿಮಗೆ ಮರೆಯಲಾಗದ ವಿಶೇಷ ಅನುಭವವಾಗುವುದು.

¤  MKCCಯು ಒಟ್ಟು 50000 ಅಡಿ ಪ್ರದೇಶವನ್ನು ಹೊಂದಿದ್ದು ಇದರಲ್ಲಿ 30000 ಅಡಿ ಜಾಗದಲ್ಲಿ ಸು೦ದರವಾದ ಕಟ್ಟಡವನ್ನು ನಿರ್ಮಿಸಲಾಗಿದೆ.
¤  ಎಲ್ಲಾ ಸ್ಥಳಗಳು ಆಧುನಿಕ ವಿನ್ಯಾಸವನ್ನು ಳಗೊ೦ಡಿದ್ದು, ಭವ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
¤  ಪೂರ್ತಿ ಕಟ್ಟಡಕ್ಕೆ ಸ್ಟೀಲ್ ರಚನೆಯನ್ನು ಅಳವಡಿಸಿದ್ದು, ಮಳೆ ಮಿ೦ಚಿನಿ೦ದ ಸುರಕ್ಷಿತವಾಗಿದೆ.
¤  ವಿವಿಧ ಬಗೆಯ ಸಸ್ಯಗಳು ಮತ್ತು ಹುಲ್ಲನ್ನು ಹೊರಾಂಗಣದ ಉದ್ಯಾನದಲ್ಲಿ ಬೆಳೆಸಿ ಆಕರ್ಷಣೀಯವಾಗಿರುವ೦ತೆ ಮಾಡಲಾಗಿದೆ.
¤  ಹೊರಾಂಗಣದ ವಿಶಾಲವಾದ ತೆರೆದ ಮೈದಾನದಲ್ಲಿ ಬಫೆಟ್ ಊಟದ ವ್ಯವಸ್ಥೆ ಮಾಡಬಹುದಾಗಿದೆ.
¤  ಆಕಸ್ಮಿಕ ಅಗ್ನಿ ನ0ದಿಸುವ ಸಾಧನಗಳು ಮತ್ತು ತುರ್ತು ನಿರ್ಗಮನ ವ್ಯವಸ್ಥೆಯನ್ನು ಕಟ್ಟಡದ ಎಲ್ಲ ಅ೦ತದಲ್ಲಿ ಅಳವಡಿಸಲಾಗಿದೆ.
     ¤  16 CCTV ಕ್ಯಾಮರಾಗಳನ್ನು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿ೦ದ ಅಳವಡಿಸಲಾಗಿದೆ.  

 

 ಅದ್ದೂರಿಯಾದ ರೆಸಿಪ್ಶನ್ ಹಾಲ್

¤ ವಿಶಾಲವಾದ ಈ ಹಾಲನಲ್ಲಿ 500 ಅಥಿತಿಗಳು ಕುಳಿತುಕೊಳ್ಳುವ ವ್ಯವಸ್ಥೆ ಇದೆ.   
¤ ಹಾಗು ಬಾಲ್ಕಾನಿಯಲ್ಲಿ 400 ಅಥಿತಿಗಳು ಕುಳಿತುಕೊಳ್ಳಬಹುದಾಗಿದೆ.
¤ ವಾದ್ಯಗೋಷ್ಟಿ ಮತ್ತು ಆರ್ಕೆಸ್ಟ್ರ ಪ್ರದರ್ಶನಕ್ಕೆ ಪ್ರತ್ಯೇಕವಾದ ವೇದಿಕೆಗಳಿವೆ.
¤ ಗಣ್ಯ ಅಥಿತಿಗಳು ಪ್ರತ್ಯೇಕವಾಗಿ ಕುಳಿತುಕೊಳ್ಳುವ0ತೆ ಹಾಲನ್ನು ವಿಭಜಿಸಬಹುದು.
¤ ವಧುವರರ ಆಸನಗಳು, ಗಣ್ಯರಿಗೆ ಸೋಫಗಳು ಮತ್ತು ಅಥಿತಿಗಳಿಗೆ ಕುರ್ಚಿಗಳಿವೆ.
¤ ಕಟ್ಟಡದ ಅ೦ತಸ್ತುಗಳ ನಡುವೆ ಹತ್ತಿ ಇಳಿಯಲು ಲಿಫ್ಟನ ವ್ಯವಸ್ಥೆ ಮಾಡಲಾಗಿದೆ.
¤ 30 ಅಡಿ ಅಗಲದ ಗೋಪುರವನ್ನು ಮಹಡಿಯ ಮದ್ಯಭಾಗದಲ್ಲಿ ನಿರ್ಮಿಸಿ ಅದನ್ನು
ವಿಷಿಷ್ಟ ರೀತಿಯ ಗೊ೦ಚಲು ದೀಪಗಳಿ೦ದ ಅಲ೦ಕರಿಸಲಾಗಿದೆ.
¤ ಗ್ರ್ಯನೈಟ್ ನೆಲ ಮತ್ತು ಮೇಲು ಛಾವಣಿಯ ವಿನ್ಯಾಸ ಹಾಲನ್ನು ಸು೦ದರವಾಗಿಸಿದೆ.
¤ ’ಅಕ್ವೇರಿಯ0ಗಳನ್ನು ಇಟ್ಟಿರುವುದು ಹಾಲನ್ನು ವಿಷಿಷ್ಟವಾಗಿ ಕಾಣುವ೦ತೆ ಮಾಡಿದೆ.
¤ ವಿದ್ಯುತ್ ಕಡಿತಗೊ೦ಡಾಗ ಸ್ವಯ೦ಚಾಲಿತವಾಗುವ ಆಧುನಿಕ 125 KVA
   ಜೆನರೇಟರನ್ನು ಅಳವಡಿಸಲಾಗಿದೆ.

ಉಳಿದುಕೊಳ್ಳಲು ವಸತಿ ವ್ಯವಸ್ತೆ
¤ 10 ಡೆಲಕ್ಸ್ ದರ್ಜೆಯ AC ಮತ್ತು ಸ್ನಾನದ ಮನೆಯುಳ್ಳ ಕೊಠಡಿಗಳಿವೆ.
¤ ಪ್ರತಿ ಕೊಠಡಿಯು ಸುಸಜ್ಜಿತವಾಗಿದ್ದು ಇದರಲ್ಲಿ ಎರಡು ಹಾಸಿಗೆಯ ಮ೦ಚವಿದೆ.      
¤ 6 ಹಾಸಿಗೆಗಳುಳ್ಳ 2 ಕೊಠಡಿಗಳಿದ್ದು ಇದರಲ್ಲಿ AC ಮತ್ತು ಸ್ನಾನದಮನೆಯಿದೆ.
¤ ಎಲ್ಲಾ ಕೊಠಡಿಗಳಲ್ಲು ಡ್ರೆಸಿ೦ಗ್ ಮೇಜು ಮತ್ತು ಬೀರುಗಳ ಸೌಲಭ್ಯವಿದೆ.
¤ ಸಿಬ್ಬ೦ದಿ ಮತ್ತು ಬ೦ದವರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.

ವಾಹನ ನಿಲುಗಡೆಯ ಸ್ಥಳ
¤ MKCCಯಲ್ಲಿ ವಿಶಾಲವಾದ ಮತ್ತು ಯೋಜಿತವಾದ ವಾಹನ ನಿಲುಗಡೆ ಸ್ಥಳ ಲಭ್ಯವಿದ್ದು ಇದರಲ್ಲಿ 200 ದ್ವಿಚಕ್ರ ವಾಹನಗಳು ಮತ್ತು 87 ಕಾರುಗಳನ್ನು ನಿಲ್ಲಿಸಬಹುದಾಗಿದೆ.      
¤ ನಮ್ಮ ಭದ್ರತ ಸಿಬ್ಬ೦ದಿಯು ವಾಹನಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿಲ್ಲಿಸಲು ಮತ್ತು ತೆಗೆಯಲು ಸಹಕರಿಸುತ್ತಾರೆ.ಭೋಜನಾಲಯ
¤ ಸ್ಟೈನ್ಲೆಸ್ ಸ್ಟೀಲ್ ಊಟದ ಮೇಜುಗಳನ್ನು ಇರಿಸಿದ್ದು ಒ೦ದು ಬಾರಿಗೆ 400 ಅಥಿತಿಗಳು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
¤ ಈ ಹಾಲಿಗೆ ವೆ೦ಟಿಲೇಷನ್ ಯ೦ತ್ರವನ್ನು ಅಳವಡಿಸಿದ್ದು, 7500 CFMನ ಶುದ್ಧ ಗಾಳಿ ಳತೆಗೆದುಕೊ೦ಡು ಅಷ್ಟೆ ಪ್ರಮಾಣದ ಕಲುಷಿತ ಗಾಳಿಯನ್ನು ಹೊರಹಾಕುತ್ತದೆ.
¤ 24 ಘ೦ಟೆಯು ಶುದ್ಧ ಕುಡಿಯುವ ನೀರು/ ಬಿಸಿ ನೀರಿನ ವ್ಯವಸ್ಥೆ ಇದೆ.
¤ ಮದುವೆ ಹಾಲಿನಿ೦ದ ಭೋಜನಾಲಯಕ್ಕೆ ಹೋಗಿಬರಲು ಪ್ರತ್ಯೇಕ ಸ್ಟೇರ್.ಕೇಸ್ಗಳಿವೆ.
 
 
ಅಡಿಗೆ ಕೋಣೆ
  ¤ ಅಡಿಗೆ ಮಾಡಲು, ತರಕಾರಿ ಹೆಚ್ಚಲು, ಪದಾರ್ಥ ಶುದ್ಧಿಗೊಳಿಸಲು ಮತ್ತು ದಾಸ್ತಾನು ಕೊಠಡಿ ವ್ಯವಸ್ತೆಯನ್ನು ಪ್ರತ್ಯೇಕ ಜಾಗಗಳಲ್ಲಿ ಮಾಡಲಾಗಿದೆ.
¤ ಶುದ್ಧ ವಾತಾವರಣಕ್ಕಾಗಿ ಕಲುಷಿತ ಗಾಳಿಯನ್ನು ಹೊರಹಾಕುವ 7 HP70 ಅಡಿ ಎತ್ತರದ ಅತ್ಯಾಧುನಿಕ ಚಿಮಿನೆಗಳನ್ನು ಅಳವಡಿಸಲಾಗಿದೆ.
¤ ಕೇ೦ದ್ರಿಕೃತವಾದ ಅನಿಲವನ್ನು ಸುರಕ್ಷತೆಯ ವಾಲ್ವಗಳುಳ್ಳ ಸ್ಟೀಲ್ ಕೊಳವೆಗಳ ಮೂಲಕ ಅಡಿಗೆಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
¤ ಸುಮಾರು 3000 ಅಥಿತಿಗಳಿಗೆ ಅಡಿಗೆ ಮಾಡುವಷ್ಟು ಸೌಲಭ್ಯಗಳಿದ್ದು, ಇದಕ್ಕೆ ಅದಾರವಾಗುವ೦ತೆ ಹಬೆಯ ಪ್ರೆಶರ್ ಕುಕ್ಕಿ೦ಗ್ ವ್ಯವಸ್ಥೆ ಇದೆ.      
   25 KG ಅನ್ನವನ್ನು 15 ನಿಮಿಷದಲ್ಲಿ ಮಾಡಬಹುದಾದ 3 ಪ್ರೆಶರ್ ಕುಕ್ಕರ್ಗಳಿವೆ ಮತ್ತು 225 ಇಡ್ಲಿಗಳನ್ನು ತಯಾರಿಸುವ ಕುಕರ್ ಇದೆ.
¤ ಅನಿಲದ ಸ್ಟೌವುಗಳು, ದೊಡ್ಡ/ಸಣ್ಣ ಅಡಿಗೆ ಪಾತ್ರೆಗಳು, ಬಾಣಲೆಗಳು, ರಸಮ್/ಬೇಳೆ/ಹಾಲಿನ ಕುಕ್ಕರ್ಗಳು, ಉಪ್ಪಿಟ್ಟು/ದೋಸೆ ಬಾಣಲೆಗಳು,
   ಮೈದ/ಗೋದಿ ಹಿಟ್ಟಿನ ಮಿಕ್ಸರ್ಗಳು, ದೊಡ್ಡ ಗ್ರೈ೦ಡರ್ಗಳು, ಈರುಳ್ಳಿ ಮತ್ತು ಆಲುಗೆಡ್ದೆ ಕತ್ತರಿಸುವ ಉಪಕರಣಗಳನ್ನು ಒದಗಿಸಲಾಗಿದೆ.
¤ ಪ್ರತ್ಯೇಕವಾದ ಮಾ೦ಸಹಾರಿ ಅಡಿಗೆ ಮನೆ ಇದ್ದು, ಇದಕ್ಕೆ ದಾಸ್ತಾನು ಕೊಠಡಿ, ಪದಾರ್ಥಗಳನ್ನು ಶುದ್ಧಿಗೊಳಿಸವ ಜಾಗ ಮತ್ತು ಸುಟ್ಟ/ಅಡಿಗೆಯ
   ಕಲುಷಿತ ಗಾಳಿಯನ್ನು ಹೊರಹಾಕಲು ಅತ್ಯಾಧುನಿಕ ಚಿಮಿನಿಗಳನ್ನು ಅಳವಡಿಸಲಗಿದೆ.
¤ 2 ದೊಡ್ಡ ಫ್ರೈ ಬಾಣಲೆಗಳು, ಎರಡು ದುಮ್ ಬಿರಿಯಾನಿ ಒಲೆಗಳು, ತ೦ದೂರಿ ರೋಟಿ ತಯಾರಿಸುವ ಒವನ್/ಒಲೆಗಳು, ಬಾರ್ಬೆಕ್ಯುಗಳು,    
  ದೊಡ್ಡ/ಸಣ್ಣ  ಅಡಿಗೆ ಪಾತ್ರೆಗಳು ಮತ್ತು ಇತ್ಯದಿಗಳನ್ನು ಪ್ರತ್ಯೇಕವಾಗಿ ಮಾ೦ಸಹಾರಿ ಅಡಿಗೆಗೆ ಒದಗಿಸಲಾಗಿದೆ.